Tuesday, January 19, 2010

ನಿನ್ನ ಸೇರಿ ಬದುಕುವಾಸೆ


ನಿನ್ನೆದೆಯ ಬಡಿತ ಕೇಳುವಷ್ಟು ನಿನಗೆ ಹತ್ತಿರವಾಗುವಾಸೆ  


ನಿನ್ನೆದೆ ಗೂಡಲ್ಲಿ ಮನೆ ಮಾಡಿ ಬಾಳುವಾಸೆ
ನಿನ್ನ ಕಣ್ಣ ರೆಪ್ಪೆಯಲ್ಲಿ ನನ್ನ ಜೋಪಾನ ಮಾಡುವಾಸೆ
ನಿನ್ನ ನುಡಿಗಳಿಗೆ ಸ್ವರವಾಗುವಾಸೆ
ನಿನ್ನ ನಗುವಿಗೆ ಚಿಮ್ಮುವ ಕಾರಂಜಿಯಾಗುವಾಸೆ
ನಿನ್ನ ದುಖದಿ ಕಂಬನಿಯಾಗಿ ಹರಿಯುವಾಸೆ
ನಿನ್ನ ಮುಂಗುರುಳ ಚುಂಬಿಸುವಾಸೆ 
ನಿನ್ನ ಉಸಿರಲ್ಲಿ ಬೆರೆತು ನಿನ್ನವಳಾಗುವಾಸೆ
ಪ್ರಿಯ, ನನ್ನಂತರಂಗದ ಮಾತಿದು, ನನ್ನ ಜೀವನ ನಿನಗರ್ಪಿಸಿ, ನಿನ್ನ ಬಾಳ ಸಂಗಾತಿಯಾಗುವಾಸೆ!

No comments:

Post a Comment