Monday, January 23, 2012

ನಿನ್ನಲಿ ಬೆರೆತು ನನ್ನನು ಮರೆತೆ

ಅಡಿಗಡಿಗೂ ಅಡಿಯಿಟ್ಟು, ನಿನ್ನಡಿಯಮೇಲೆ  ಅಡಿಯಿಟ್ಟು 
ನಿನ್ನಡಿಯಲೇ ಅಡಿಯಿಡುವುದ ಕಲಿತು 
ನನ್ನಡಿಯನೇ ನಾನು ಮರೆತೆ

ದನಿದನಿಗೂ ದನಿಗೂಡಿಸಿ ನಿನ್ನ ದನಿಯಲೇ ಹಾಡಿ
ನನ್ನ ದನಿಯನು ನಾನು ಮರೆತೆ 

ಕ್ಷಣ ಕ್ಷಣವೂ ನಿನಗರ್ಪಿಸಿ ಕ್ಷಣಗಣನೆಯ ಮರೆತು
ನಿನ್ನ ಕ್ಷಣಿಕ ಪ್ರೀತಿಗೆ ಮೆರೆದೆ

ಉಸಿರುಸಿರಿಗೆ ನನ್ನುಸಿರ ಸೇರಿಸಿ ನಿನ್ನುಸಿರೆe ನನ್ನುಸಿರೆಂದು 
ನಿನ್ನ  ಸೇರಿ ನನ್ನನು ನಾ ಮರೆತೆ 




4 comments:

  1. ನಿನ್ನ ಈ ಕವನ ಓದುತ ಓದುತ
    ನನ್ನನ್ನೇ ನಾ ಮರೆತೆ....

    Nice Lines FRIEND... keep it up!!!

    ReplyDelete
  2. ನಿನ್ನಲಿ ಬೆರೆತು ನನ್ನನು ಮರೆತೇ,....ಮೈ ಮೆರೆಯುವುದು ಇಂತಹ ಮಧುರ ಅನುಭೂತಿಗಳಲ್ಲೇ...
    ಚಂದದ ಕವನ..

    ReplyDelete