Tuesday, February 16, 2010

ಏನಾಗಲಿ ನಲ್ಲ ನಾ ನಿನಗೆ ?ಹೂವಾಗಲೇ ನೀ ಅಡಿಯಿಟ್ಟಲ್ಲಿ ?

ಗುರಿಯಾಗಲೇ ನಾ ನಿನ್ನ ಜೀವನದಲ್ಲಿ?
ಗುರಿಯ ತಲುಪುವ ಹಾದಿಯಗಲೇ ನಾ ?
ನೀ ಸವೆಯುವ ಹಾದಿಯಲಿ ತಂಗಾಳಿಯಗಲೇ ನಾ ?
ತಂಗಾಳಿಯೊಂದಿಗೆ ಬೆರೆತ ಪರಿಮಳವಾಗಲೇ ನಾ ?
ಪರಿಮಳವಾಗಿ ನಿನ್ನ ಸುತ್ತ ಸುಳಿಯಲೇ ನಾ ?
ನಿನ್ನ ಕೈ ಹಿಡಿದು ನಿನ್ನ ಪಯಣದಿ ಜೊತೆಯಾಗಿ ಸಾಗಲೇ ನಾ ?
ಚಿರಕಾಲ ನಿನ್ನ ಜೊತೆಯಾಗಿ ಜೀವಿಸಲೇನು ನಾ ?

2 comments: